ಭವಿಷ್ಯತಾವಾದಿಗಳು
ಹಿಂದಿನದೆಲ್ಲವನ್ನೂ ಸಂಪೂರ್ಣವಾಗಿ ತಿರಸ್ಕರಿಸಿ ವಸ್ತು ಶೈಲಿ ಎರಡರಲ್ಲಿಯೂ ಹೊಸತನವನ್ನು ಸಾಹಿತ್ಯದಲ್ಲಿ ಸಾಧಿಸಬೇಕೆಂಬ ಪಂಥದವರು (ಪ್ಯೂಚರಿಸ್ಟ್ಸ್). ರಷ್ಯದಲ್ಲಿ ಈ ಪಂಥವನ್ನು ಅನುಸರಿಸಿದವರಲ್ಲಿ ಎರಡು ಪಂಗಡಗಳಾದುವು-ಇಗೊ-ಫ್ಯೂಚರಿಸ್ಟ್ಸ್ ಮತ್ತು ಕೂಬೊ-ಪ್ಯೂಚರಿಸ್ಟ್ಸ್. ರಷ್ಯದ ಭವಿಷ್ಯತಾವಾದಿಗಳು ಪ್ರತಿಮಾವಿಧಾನದ ಅನುಭಾವವನ್ನು ತಿರಸ್ಕರಿಸಿದುದು ಮಾತ್ರವಲ್ಲದೆ ಮ್ಯಾಕ್ಸಿಂಗಾರ್ಕಿಯನ್ನೂ ತಿರಸ್ಕರಿಸಿದರು. ಯಂತ್ರಗಳ ಕಾರ್ಖಾನೆಗಳ ಮತ್ತು ವೇಗದ ಪ್ರಶಂಸೆ, ಶೈಲಿಯಲ್ಲಿ ಅತಿನವೀನ ಬಳಕೆಗಳು ಮತ್ತು ಪ್ರಯೋಗಗಳು-ಇವು ಈ ಸಾಹಿತ್ಯದ ಕೆಲವು ಲಕ್ಷಣಗಳು.				     
	   (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ